‘ಪಾರು ವೈಫ್ ಆಫ್ ದೇವದಾಸ್’ ಇದೆ ತಿಂಗಳ ೨೭ ರಂದು ತೆರೆಗೆ ಬರಲು ಸಿದ್ದವಾಗಿದೆ. ಪ್ರಾದೇಶಿಕ ಸೆನ್ಸಾರ್ ಮಂಡಳಿಯಿಂದ ‘ಯು ಅರ್ಹತಾ ಪತ್ರವನ್ನು ಪಡೆದ ಮೇಲೆ ‘ಪಯಣ, ಸಂಚಾರಿ’ ಸಿನಿಮಾಗಳ ನಂತರ ಕಿರಣ್ ಗೋವಿ ಅವರ ತೃತೀಯ ಚಿತ್ರ ‘ಪಾರು ವೈಫ್ ಆಫ್ ದೇವದಾಸ್’ ನವಿರಾದ ಪ್ರೇಮ, ಕುತೂಹಲಗಳ ಸಂಗಮ ಕೃಷ್ಣ ದೇವೇಗೌಡ, ಮುಕ್ತಾರ್ ಈ ಚಿತ್ರದ ನಿರ್ಮಾಪಕರುಗಳು.
ರಮೇಶ್ ರಾಜ್ ಅವರ ಛಾಯಾಗ್ರಹಣದಲ್ಲಿ, ಅರ್ಜುನ್ ಜನ್ಯ ಅವರ ಸಂಗೀತದಲ್ಲಿ, ಫಳಿನಿ ರಾಜ್ ಅವರ ಸಾಹಸವಿದೆ. ಶ್ರೀನಗರ ಕಿಟ್ಟಿ ಹಾಗೂ ಸೌಂದರ್ಯ ಜೋಡಿಯಾಗಿ ಅಭಿನಯಿಸಿದ್ದಾರೆ. ಇದೊಂದು ಪ್ರೀತಿಯ ನಶೆ ಇರುವ ಚಿತ್ರವಾಗಿದೆ. ನೇಹಾ ಪಾಟಿಲ್, ಲಯೇಂದ್ರ, ಮೋಹನ್ ಜುನೇಜ, ವಿ ಮನೋಹರ್ ಪ್ರಮುಖ ತಾರಾಗಣದಲ್ಲಿ ಇದ್ದಾರೆ.